ಗುರುವಾರ, ಸೆಪ್ಟೆಂಬರ್ 27, 2012

ನಾ ಓದಿದ ಪುಸ್ತಕ - ಕಪಿಲಿಪಿಸಾರ(KAPILIPISARA)

        ಕಪಿಲಿಪಿಸಾರ(ಕಪಿ=ಮಂಗ+ಲಿಪಿ=ಬರವಣಿಗೆ+ಸಾರ=ಸಾರಾಂಶ)

ನಾನು ಕಥೆ ಕಾದಂಬರಿ ಎಲ್ಲಾ ಓದೋಕೆ ಶುರು ಮಾಡಿದ್ದು PUC ಡುಮ್ಕಿ ಹೊಡ್ದಾಗ( To come out of depression ಎಂಬ ಹಣೆಪಟ್ಟಿ ಹೊತ್ತ್ಕೊಂಡು). ಆಗ ಹಿಡಿದ ಹುಚ್ಚು ಇನ್ನೂ ಬಿಟ್ಟಿಲ್ಲ/ವಾಸಿಯಾಗಿಲ್ಲ.

ನೆನ್ನೆಯಷ್ಟೇ ಒಂದು ರೋಚಕ ಕಾದಂಬರಿ ಎಂಬ ಉಪ ಶೀರ್ಷಿಕೆ(Sub Title) ಹೊತ್ತ, ನಿಜವಾಗಿಯೂ ಅಷ್ಟೇ ರೋಚಕತೆಯನ್ನು ಮೂಡಿಸೋ ಒಂದು ಪುಸ್ತಕ ಓದಿ ಮುಗಿಸಿದೆ.

ಓದಿ ಆಯ್ತು, ಪುಸ್ತಕ ತುಂಬಾನೇ ಇಷ್ಟ ಆಯ್ತು. ಈಗ ನಿಮಗೆ ಕೊರೆಯೋಣ ಅಂತ.

ಪ್ರಕಾಶ್ ಕಂಬತ್ತಳ್ಳಿ ಅವರ ಅಂಕಿತ ಪುಸ್ತಕ ದಿಂದ ಪ್ರಕಟಗೊಂಡಿರುವ, ಕಪಿಲಿಪಿಸಾರವು ಡಾ.ಕೆ.ಎನ್.ಗಣೇಶಯ್ಯ ಎಂಬ ಕೃಷಿ ವಿಜ್ಞಾನಿಯ ಕೂಸು.

ಸ್ನೇಹಿತ ಶಶಾಂಕ್ ಬರೆದಿದ್ದ ಬ್ಲಾಗ್ ಓದಿ, ಗಣೇಶಯ್ಯನವರ ಶಾಲಭಂಜಿಕೆ ಪುಸ್ತಕ ಹುಡುಕಿ ತಂದೆ.(http://shashanksoghal.blogspot.in/search?updated-min=2011-01-01T00:00:00%2B05:30&updated-max=2012-01-01T00:00:00%2B05:30&max-results=9). ಕೊಟ್ಟ 80ರೂ. ಗಳಿಗಂತೂ ಮೋಸ ಆಗ್ಲಿಲ್ಲ(ಒಂದೇ ದಿನದಲ್ಲಿ ಓದಿ ಮುಗಿಸಿದೆ). ಅದಾದ ಮೇಲೆ ಅವರ ಇನ್ನೂ 4 ಪುಸ್ತಕಗಳನ್ನು ಕೊಂಡು ತಂದು, ಈಗಷ್ಟೇ ಕಪಿಲಿಪಿಸಾರವನ್ನು ಮುಗಿಸಿದೆ.

ಗಣೇಶಯ್ಯನವರು ಕಥೆ ಹೆಣೆಯುವ ರೀತಿಯೇ ಸೊಗಸು. ಒಂಥರಾ ಉಪೇಂದ್ರ ಸಿನೆಮಾ ಇದ್ದಂತೆ. ರೀಲ್ ಮತ್ತು ರಿಯಲ್ ಗಳನ್ನು ಬೇರ್ಪಡಿಸುವುದೇ ಕ್ಲಿಷ್ಟಕರ( ಬೇರ್ಪಡಿಸೋ ತಲೆನೋವು ಯಾಕೆ, ಕಥೆ ಚೆನ್ನಾಗಿದ್ದರೆ ಅಷ್ಟೇ ಸಾಕಲ್ವಾ?)

ಇನ್ನು ಪುಸ್ತಕದ ಬಗ್ಗೆ:

ನಮ್ಮ ದೇಶದ ಔಷಧೀಯ ಸಸ್ಯಗಳ ಬಗ್ಗೆ, ಅದನ್ನು ಕೊಳ್ಳೇ ಹೊಡೀತಿರೋ ವಿದೇಶೀ ಕಂಪನಿಗಳ ಬಗೆಗಿನ ನಗ್ನ ಸತ್ಯಗಳು( ಉದಾ: ಅರಿಶಿನವನ್ನು ಅಮೇರಿಕಾದವರು ಪೇಟೆಂಟ್ ಮಾಡಿಸಿಕೊಂಡಿದ್ದು - ಯೂನಿವೆರ್ಸಿಟಿ ಆಫ್ ಮಿಸಿಸ್ಸಿಪ್ಪಿ ಮೆಡಿಕಲ್ ಸೆಂಟರ್, ಡಿಸೆಂಬರ್ 1993 - ನಂತರ ಭಾರತ ಅದಕ್ಕೆ ಸವಾಲೊಡ್ಡಿ ನ್ಯಾಯಾಂಗದಲ್ಲಿ ತೀರ್ಪು ಭಾರತದ ಪರವಾಯಿತು), ಅಂಡಮಾನ್ ಗೆ ಆ ಹೆಸರು ಬರಲು ಕಾರಣ( ಹನುಮಾನ್ ಹಂಡುಮಾನ್ ಆಗಿ ನಂತರ ಅಂಡಮಾನ್ ಎಂದು ನಾಮಾಂತರಗೊಂಡಿತೆಂದು ಹೇಳಲಾಗಿದೆ).

ಪುಸ್ತಕದಲ್ಲಿ ಅಶ್ವಿನಿಗಳಿಂದ ಹಿಡಿದು( ಪುರಾತನ ಕಾಲದಿಂದ ಬಂದಿರುವ ರಹಸ್ಯ ಆಯುರ್ವೇದ ವೈದ್ಯರು), ಜರವ (ಅಂಡಮಾನ್ ನಲ್ಲಿನ ನಶಿಸಿ ಹೋಗುತ್ತಿರುವ ನಾಗರೀಕತೆಯಿಂದ ಬಹು ದೂರ ಉಳಿದಿರುವ ಒಂದು ಜನಾಂಗ) ಗಳ ಔಷಧೀಯ ಸಸ್ಯಗಳ ಬಗೆಗಿನ ಜ್ಞಾನ, ಸಂಸ್ಕೃತ ಗ್ರಂಥಗಳು(ಉದಾ: ಖಗೇಂದ್ರ ಮಣಿ ದರ್ಪಣ), ಬಹಳ ಹಿಂದೆ ಬಳಸುತ್ತಿದ್ದ ಚಿತ್ರ ಲಿಪಿ( ನೀವು ಹರಪ್ಪ ಮೊಹೆಂಜೋದಾರೋ ನಾಗರೀಕತೆಯಷ್ಟು ಹಿಂದೆ ಹೋಗ್ಬೇಕು) ಇದೆಲ್ಲಾ ಮುಗಿದು ಕಡೆಗೆ ಕಥೆ ಸಂಜೀವಿನಿ( ಸತ್ತವರನ್ನು/ಕೋಮಾಗೆ ಹೋದವರನ್ನು ಬದುಕಿಸುವ ಅಥವಾ ಮೊದಲಿನ ಸ್ಥಿತಿಗೆ ತರುವ ಔಷಧೀಯ ಸಸ್ಯ) ಗೆ ಬಂದು ನಿಲ್ಲುತ್ತದೆ.
                                      ಈ ಕೆಳಗಿನ ಚಿತ್ರವನ್ನು ನೋಡಿದರೆ ನಿಮಗೇನನ್ನಿಸುತ್ತೆ
(ಇಂಜಿನಿಯರಿಂಗ್ ನಲ್ಲಿ Scale ಹಿಡ್ಕೊಂಡು Machine Drawing ಮಾಡ್ದೋಳು, ಈಗ ಪುಸ್ತಕದಲ್ಲಿರೋ ಚಿತ್ರಾನ ಹಾಗೆ ಭಟ್ಟಿ ಇಳಿಸೋ ಪ್ರಯತ್ನ ಮಾಡಿದೀನಿ ದಯವಿಟ್ಟು ಬಯ್ಯಬೇಡಿ - ನಂಗೆ ಶಾಲೇಲಿ ಓದ್ಬೇಕಾದ್ರೆ ಮನೆ ಚಿತ್ರ ಬಿಟ್ಟು ಇನ್ನೊಂದು ಚಿತ್ರಾನೂ ಬರ್ಯೋಕೆ ಬರ್ತಿರ್ಲಿಲ್ಲ). 

 ಸೂರ್ಯ ವಂಶದ ರಾಜನ ಯೋಧ/ಸೇವಕ( ಹನುಮಂತ) ಸಾಗರ ದಾಟಿ ದ್ವೀಪ ಸೇರಿದ

ಅದ್ಹೇಗೆ ಅಂತ ಕೇಳ್ತೀರಾ... ಅದಕ್ಕೆ ನೀವು ಪುಸ್ತಕಾನ ಕೊಂಡು ಓದ್ಬೇಕು(ಮೊದ್ಲೇ ನಮ್ ಕನ್ನಡ ಪುಸ್ತಕಕ್ಕೆ Market ಇಲ್ಲ, ಪುಸ್ತಕಾನ ಈಗ ಕೊಂಡು ಓದೋರೆ ಕಮ್ಮಿ).

ಒಟ್ಟಾರೆ ಹೇಳೋದಾದ್ರೆ ಕೊಡೋ ಕಾಸಿಗೆ ಮೋಸ ಮಾಡದ ಪುಸ್ತಕ.

ಮಾಹಿತಿ:
ಪುಸ್ತಕದ ಹೆಸರು : ಕಪಿಲಿಪಿಸಾರ(Kapilipisara)
ಬೆಲೆ: 130ರೂ. ಗಳು
ಪ್ರಕಟಣೆ
& ದೊರೆಯುವ ಸ್ಥಳ: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು.

2 ಕಾಮೆಂಟ್‌ಗಳು: