2011ರಲ್ಲಿ ಕುಂಚ ಕನ್ನಡ ಶುಭಾಷಯ ಪತ್ರಗಳು ಅಂತ ಕನ್ನಡ GREETING CARD ಶುರು ಮಾಡ್ದಾಗ ಮುಂದೆ ಕನ್ನಡದ ಉಲ್ಲೇಖಗಳುಳ್ಳ ಟಿ-ಶರ್ಟ್ ಮಾಡ್ಬೇಕು ಅಂತ ನಾನು ಮತ್ತು ಸ್ನೇಹಿತ ವಿನಯ್ ಭಾರಿ ತಲೆ ಕೆಡುಸ್ಕೊಂಡ್ವಿ. ಆಗ ಮನಸ್ಸಿಗನ್ಸಿದ್ದನ್ನ ಒಂದಷ್ಟು ಗೀಚಿದ್ದೆ. ಅನಿವಾರ್ಯ ಕಾರಣಗಳಿಂದ ಅದು ಕೈಗೂಡಲಿಲ್ಲ.
ಈಗ ಬ್ಲಾಗ್ ನಲ್ಲಿ ಬರೀಬೇಕು ಅನ್ನಿಸ್ತು ಬರೀತಿದೀನಿ ....
© ಪಲ್ಲವಿ ರಂಗನಾಥ್ ( ಸ್ವಲ್ಪ ಜಾಸ್ತಿ ಆಯ್ತು ಒಸಿ ಅಡ್ಜಸ್ಟ್ ಮಾಡ್ಕೊಳಿ)
ಅವ್ನ್ ಮುಖ ಸುಡಾ -ಇದಪ್ಪಾ ನಮ್ ಭಾಷೆ ಗಮ್ಮತ್ತು.
ಈಗ ಬ್ಲಾಗ್ ನಲ್ಲಿ ಬರೀಬೇಕು ಅನ್ನಿಸ್ತು ಬರೀತಿದೀನಿ ....
© ಪಲ್ಲವಿ ರಂಗನಾಥ್ ( ಸ್ವಲ್ಪ ಜಾಸ್ತಿ ಆಯ್ತು ಒಸಿ ಅಡ್ಜಸ್ಟ್ ಮಾಡ್ಕೊಳಿ)
- ನಮ್ ಕನ್ನಡಾನ ಇಷ್ಟ ಪಡೋಕೆ ಕಾವ್ಯ, ಕಗ್ಗ, ಕಾದಂಬರಿ ಎಲ್ಲಾ ಓದ್ಲೇಬೇಕಾ?... ಕನ್ನಡಾನ ಪ್ರೀತ್ಸೋ ಮನಸ್ಸಿದ್ದ್ರೆ ಸಾಲ್ದಾ?!!!
- ಮಾತು ಯಾವ ಭಾಷೇಲೆ ಆಡ್ರಿ, ಬಯ್ಯೋದ್ ಮಾತ್ರ ಕನ್ನಡದಲ್ಲೇ ಆಗಿರ್ಲಿ, ಆಗ್ಲೇ ಬಯ್ದಿದ್ ಬಾಯ್ಗೂ ಸಮಾದಾನ, ಮನಸ್ಸಿಗೂ ತೃಪ್ತಿ.
ಅವ್ನ್ ಮುಖ ಸುಡಾ -ಇದಪ್ಪಾ ನಮ್ ಭಾಷೆ ಗಮ್ಮತ್ತು.
- ನಗುತ ನಗಿಸುತ ಎಲ್ಲರೊಳಗೊಂದಾಗಿ ಬಾಳೋ ಗುಣ ನನ್ನದು, ನಮ್ಮ ಕನ್ನಡಿಗರದು.
- ನಮ್ ಕನ್ನಡಾನ ನಾನ್ ಮಾತಾಡ್ತೀನಿ ಯಾರ್ ಏನ್ ಕಿತ್ತಾಕ್ಕೊತಾರೋ ಕಿತ್ಹಾಕೊಳ್ಳಿ.
- ನಾವು ಕನ್ನಡಿಗರು ನಮಗದೇ ಹೆಮ್ಮೆ.
- ಕೆಂಪೇಗೌಡ್ರ ನಾಡಲಿ ಕನ್ನಡ ಕಹಳೆ ಮೊಳಗಲಿ ನನ್ನಿಂದಲೇ ಅದು ಮೊದಲಾಗಲಿ.
- ನಾನೇ ಬೇರೆ, ನಾನ್ ಕನ್ನಡಾನ ಪ್ರೀತ್ಸೋ ರೀತೀನೆ ಬೇರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ