2011ರಲ್ಲಿ "ಕುಂಚ ಕನ್ನಡ ಶುಭಾಷಯ ಪತ್ರಗಳು" ಅನ್ನೋ ಹೆಸರಿನಲ್ಲಿ, ಕನ್ನಡ GREETINGS
CARD ಅನ್ನು ಹೊರತಂದಿದ್ದೆ. ಅನಿವಾರ್ಯ ಕಾರಣಗಳಿಂದ ಅದನ್ನ ಮುಂದುವರೆಸೋಕೆ
ಆಗ್ಲಿಲ್ಲ :-(
( ಕರ್ನಾಟಕದಲ್ಲಿ ಕನ್ನಡದ್ದು ಎಂಬ ಸೀಮಿತ ಮಾರುಕಟ್ಟೆಯಲ್ಲಿ ಉಸಿರಾಡೋ ಪ್ರಯತ್ನ ಪಟ್ಟು, ಕಡೆಗೂ ಬದುಕಲಾರದೆ ಕೆಲ ದಿನಗಳಲ್ಲೇ ಜೀವ ಬಿಟ್ಟ ಕೂಸು)ಮೊದಲ ಅವತರಣಿಕೆಯ ಕೆಲ ಪ್ರತಿ ಇಲ್ಲಿದೆ.
ಒಂದೊಂದು ಪತ್ರದ ಹಿಂದಿನ ಅನುಭವ, ಬರಹ ಮತ್ತು ಛಾಯಾ ಚಿತ್ರಗಳೊಡನೆ ಭಾವನೆಗಳನ್ನು ಸಮ್ಮಿಳಿತಗೊಳಿಸಲು ನಾನು ಪ್ರಯತ್ನಿಸಿದ್ದು, ಎಲ್ಲವನ್ನೂ ನಿಮ್ಮೊಟ್ಟಿಗೆ ಹಂಚಿಕೊಳ್ಳೋ ಒಂದು ಪುಟ್ಟ ಪ್ರಯತ್ನ.
1. ಒಂದು ಮಾತಿದೆ - ಒಂದು ವಸ್ತುವನ್ನು ಪಡೆಯುವವರೆಗೂ ಗಂಡು ಅದನ್ನು ಪಡೆದೇ ತೀರಬೇಕೆಂದು ಪ್ರಯತ್ನಿಸುತ್ತಾನೆ ಮತ್ತು ಹೆಣ್ಣು ಆ ಸಂಬಂಧದ ನಂತರ ಅದನ್ನು ಉಳಿಸಿಕೊಳ್ಳಲು,ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.
ಈ ಉಲ್ಲೇಖವನ್ನು ಯಾರು ಬರೆದರೋ ಗೊತ್ತಿಲ್ಲ ಇದನ್ನ ಓದಿದ ಮೇಲೆ ನನಗೆ ಅನ್ನಿಸಿದ್ದು - ಒಂದು ಬಾಂಧವ್ಯವನ್ನು ಗಟ್ಟಿಗೊಳಿಸಲು ಚಿಕ್ಕ ಚಿಕ್ಕ ಸಂಗತಿಗಳು ಎಷ್ಟು ಅನುವಾಗುತ್ತವೆ ಎಂದು. ಆಗ ಜನ್ಮ ತಳೆದದ್ದೆ ಈ ಶುಭಾಷಯ ಪತ್ರದ ಸಾಲುಗಳು. ಸಾಲುಗಳಿಗೆ ಚಿತ್ರದ ರೂಪ ಕೊಟ್ಟು ಜೀವ ತುಂಬುವಲ್ಲಿ ಅಕ್ಕ- ಸುಗಮ, ಭಾವ-ಮಂಜುನಾಥ್, ಸ್ನೇಹಿತರಾದ ವಿಶ್ವನಾಥ್ ಬಣಕಾರ್ ಮತ್ತು ವಿವೇಕ್ ಭಟ್ ರವರ ಶ್ರಮವಿದೆ.
2. ಒಂದು ಹುಡುಗಿಗೆ ತನ್ನ ಪ್ರೇಮನಿವೇದನೆಯನ್ನು ಹೇಳಿಕೊಳ್ಳುವ ಮುನ್ನ ಒಬ್ಬ ಹುಡುಗನಿಗಾಗುವ ತಳಮಳ - ನಿಸಾರ್ ಅಹಮದ್ ರವರ ಒಂದು ಪದ್ಯದ ಸಾಲಿನಂತೆ - ಬರುವೆಯೋ ಬಾರೆಯೋ ಎನ್ನುತಿದೆ ರಮ್ಯೋದ್ಯಾನ(ಹಾಡು-ಮತ್ತದೇ ಸಂಜೆ, ಅದೇ ಬೇಸರ) ಹುಡುಗನ ದ್ವಂದ್ವ ಭಾವನೆಗಳನ್ನ (ಅಂಡು ಸುಟ್ಟ ಬೆಕ್ಕಿನಂತೆ) ಚಿತ್ರದಲ್ಲಿ ಬಿತ್ತರಪಡಿಸಲು ಶ್ರಮ ಪಟ್ಟಿದ್ದು - ವಿವೇಕ್ ಮತ್ತು ಚೇತನ್.
ಚಹಾದ ಬಿಸಿ ಆರುವ ಮುನ್ನ ಬಾ - ಅನ್ನುವ ಧನಾತ್ಮಕ ಭಾವನೆಯ ಸಾಲು ಪತ್ರದ ಇನ್ನೊಂದು ಬದಿಯಲ್ಲಿದೆ.
3. ಯಾರೋ ಒಂದ್ ಸಲ SMS ಕಳ್ಸಿದ್ರು I MISS YOU ಅನ್ನೋದಕ್ಕೆ ಕನ್ನಡದಲ್ಲಿ ಏನಂತಾರೆ ಅಂತ - ನೀನು ಇಲ್ಲಿಲ್ಲ ಹಾಗಾಗಿ ನನ್ನಲಿ ನಾನಿಲ್ಲ - ಈ ತರ ಹೇಳ್ಬೋದೇನೋ ಅಂತ ಪ್ರತ್ಯುತ್ತರ ಕಳಿಸಿದ್ದೆ.
ಹುಟ್ಟು ಹಬ್ಬ ಅಂದರೆ ಹೊಸದಿನ, ಹೊಸತನ .... ಎದುರಿಗಿಲ್ಲದೆಯೂ ಎದುರಿಗಿರುವಂತೆ ಶುಭಾಶಯವನ್ನು ಎಷ್ಟು ಪರಿಣಾಮಕಾರಿಯಾಗಿ ಹೇಳಬಹುದು ಎಂದು ಆಲೋಚಿಸಿದಾಗ ಹುಟ್ಟಿದ್ದೇ ಈ ಪತ್ರದ ಸಾಲುಗಳು ...
4. ಮನುಷ್ಯನಿಗೆ ಗುರಿ ಅನ್ನೋದು ಒಂದು ಇದ್ದರೆ ಏನನ್ನಾದರೂ ಸಾಧಿಸಬಲ್ಲ. ಹಿಂದೆ ಆಗಿದ್ದೆಲ್ಲ BLACK and WHITE ಮುಂದೆ ಇರೋದು COLOURFUL ಅನ್ನೋದನ್ನ ಚಿತ್ರ ಮತ್ತು ಸಾಲುಗಳು ಹೇಳುತ್ತವೆ.
ಯಾರ್ ಬರ್ಲಿ,ಇರ್ಲಿ, ಹೋಗ್ಲಿ ಜೀವನ ಅಂತು ಸಾಗತ್ತೆ. ಆದರೆ ಬದುಕಿಗೊಂದು ಪರಿಪೂರ್ಣತೆ ಬರೋದು? - ಹೇಗೋ ಒಂದು ಅಂತ ಬದುಕ್ದಲೇ ಹೀಗೆ ಅಂತ ಬದುಕ್ದಾಗ.
ಸ್ಪೂರ್ತಿ :
- You are the creator of your own DESTINY - Swamy Vivekananda
- DREAMS is not what you see in sleep, is the thing which doesn't let you to sleep - Dr. APJ Kalam
ನೀನಿಲ್ಲದೆಯೂ ನಾ ಬದುಕಬಲ್ಲೆ ಎಂಬ ಸಾಲು ಪತ್ರದ ಇನ್ನೊಂದು ಬದಿಯಲ್ಲಿದೆ.
ವಿಶೇಷ ಕೃತಜ್ಞತೆಗಳು:
ವಿಶೇಷ ಕೃತಜ್ಞತೆಗಳು:
- ಬೆನ್ನು ತಟ್ಟಿ, ಬೆನ್ನೆಲುಬಾಗಿ ನಿಂತಿದ್ದಕ್ಕಾಗಿ - ವಿವೇಕ್ ಭಟ್, ವಿನಯ್ ಕುಮಾರ್, ಪುಷ್ಯಂತ್, ಅವಿನಾಶ್
- ಫೋಟೋ ಕೃಪೆ: ವಿವೇಕ್ ಭಟ್, ವಿಶ್ವನಾಥ್ ಬಣಕಾರ್, ದೀಪಕ್ ನಾಯಕ್
- ನನ್ನ ತಿಕ್ಕಲುತನವನ್ನೆಲ್ಲಾ ಸಹಿಸಿಕೊಂಡು, ನನ್ನ ಹುಚ್ಚು ಕಲ್ಪನೆ(IDEA)ಗಳಿಗೆ ಜೀವ ತುಂಬಲು ಕ್ಯಾಮೆರಾ ಕಣ್ಣಿಗೆ ಪೋಸು ಕೊಟ್ಟದ್ದಕ್ಕಾಗಿ : ಸುಗಮ, ಮಂಜುನಾಥ್ & ಚೇತನ್
- ಸಹಾಯ - ಜಯಕೀರ್ತಿ & ವಿನಯ್-ತುಮಕೂರು
- ಕರಡು ತಿದ್ದಿದ್ದಕ್ಕಾಗಿ - ಹರಿ ಪ್ರಕಾಶ್
ಮೆಚ್ಚಿದೆನು ನಿಮ್ಮ ಸಾಲುಗಳನ್ನ
ಪ್ರತ್ಯುತ್ತರಅಳಿಸಿಬರೆಯುವೆನು ಕೆಲವು ಕವಿತೆಗಳನ್ನ
ಮುಟ್ಟಲಿ ನಮ್ಮ ಸಂದೇಶ ಜನಗಳನ್ನ
ಚೆಲ್ಲೋಣ ಎಲ್ಲೆಲ್ಲು ಕನ್ನಡ ಬೆಳಕನ್ನ
Ranganath R