ಗುರುವಾರ, ಆಗಸ್ಟ್ 27, 2015

ಸುತ್ತೋಣ ನಮ್ಮ ಕರುನಾಡು - 01 - ಹಾವೇರಿ ಜಿಲ್ಲೆ

ಪ್ರತಿಯೊಂದು ಪ್ರದೇಶಕ್ಕೂ ಅದರದೇ ಆದ ಸೊಗಡುಘಮವಿರುತ್ತದೆಭಾಷೆಸಂಸ್ಕೃತಿಆಚರಣೆಸಂಪ್ರದಾಯಗಳುಉಡುಗೆ ತೊಡುಗೆ ಎಲ್ಲವೂ ವಿಭಿನ್ನ .... 
ಪ್ರತಿ 20 ಕಿಮೀಗೊಮ್ಮೆ ಭಾಷೆ ಬದಲಾಗುತ್ತದೆ ಎಂದು ಭಾಷಾತಜ್ಞರು ಹೇಳುತ್ತಾರೆ.
"ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಿದಾಗ ಮಾತ್ರ ನಾವು  ಪ್ರದೇಶದ ಸೊಗಡನ್ನು ತಿಳಿಯಲು ಸಾಧ್ಯ" ಎಂದು ಡಾll ಎಸ್ಎಲ್ಭೈರಪ್ಪ ನವರು ತಮ್ಮ ಆತ್ಮಕಥೆ "ಭಿತ್ತಿಯಲ್ಲಿ ಬರೆದುಕೊಂಡಿದ್ದಾರೆ. 

ಇದೆಲ್ಲಾ ತಲೆಯೊಳಹೊಕ್ಕುಬೆರೆತು , ಬೆಂದು ಹೊರಹೊಮ್ಮಿದ ಹೊಸ ಹುಳುವೇ "ಕರ್ನಾಟಕದ ಅಷ್ಟೂ ಜಿಲ್ಲೆಗಳನ್ನು ನೋಡಬೇಕೆನ್ನುವ ಕನಸು"

ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳಿವೆಕೆಲವು ಹೊಸತು 
ಮತ್ತು ಕೆಲವು ಹಳೆಯವು 
(1956ರಲ್ಲಿ ರಾಜ್ಯಾವಾರು ವಿಂಗಡಣೆಯಾದಾಗಿನ ಜಿಲ್ಲೆಗಳು). 
Karnataka District wise Map

ಎಷ್ಟು ದಿನ ಅಂತ ಕಾಯೋದುಸರಿ UrbanARCKS ( www.urbanarcks.com) ವತಿಯಿಂದ ಮಿಂಚಂಚೆಯನ್ನು ಕಳಿಸೋಣ. ಆಸಕ್ತಿಯಿರುವವರು ಜೊತೆಗೂಡುತ್ತಾರೆ ಎಂದುಕೊಂಡೆ
ಯಾವ ಜಿಲ್ಲೆಗೆ ಹಾಕೋದು ಎಂದು ಯೋಚಿಸಿದಾಗ ತಲೆಗೆ 
ಹೊಳೆದದ್ದು ಕರ್ನಾಟಕದ ನಟ್ಟ ನಡು ಭಾಗದ "ಯಾಲಕ್ಕಿಯ ಕಂಪಿನ ಜಿಲ್ಲೆಹಾವೇರಿ".
Haveri Entrance

ಆಗಸ್ಟ್ 15 ಮತ್ತು 16 ರಂದು ಹಾವೇರಿ ಜಿಲ್ಲಾ ದರ್ಶನ (Explore Namma Karunadu - Series 01 - Haveri District) ಎಂಬ ಹಣೆಪಟ್ಟಿ ಹಾಕಿ  ಮಿಂಚಂಚೆಯನ್ನು ಕಳಿಸಿದೆ. 

ಹಾವೇರಿಯ ಯಾವುದೋ ಒಂದು ಹಳ್ಳಿಗೆ ಹೋಗಿ ಸರ್ಕಾರಿ ಶಾಲೆಯ ಮಕ್ಕಳೊಟ್ಟಿಗೆ ಸ್ವತಂತ್ರ ದಿನಾಚರಣೆಯನ್ನು ಆಚರಿಸೋಣ ಎಂದು ಮಿಂಚಂಚೆಯಲ್ಲಿ ತಿಳಿಸಿದ್ದೆಯಾವ ಜಿಲ್ಲೆಎಷ್ಟು ಮಕ್ಕಳು ಇತ್ಯಾದಿ ವಿಷಯವಾಗಿ ನಾನು ಏನೂ ಯೋಜಿಸಿರಲಿಲ್ಲ. ಊಟ ಮತ್ತು ತಿಂಡಿ ದಾರೀಲಿ ಸಿಕ್ಕ ಕಡೆವಸತಿ - ಎಲ್ಲಿ ಸಾಧ್ಯವೋ ಅಲ್ಲಿಹೀಗೆ ಅಸಾಧ್ಯ ಎಂದು ಹೇಳಲಾಗದಿದ್ದರೂ ಕಷ್ಟಸಾಧ್ಯಗಳ ನಡುವೆ ನುಸುಳಿ ಹೊರಟದ್ದು ಹಾವೇರಿಯೆಡೆಗೆ .... 
ಒಂದಷ್ಟು ಜನ ಬರುತ್ತೇವೆಂದು ಹೇಳಿ ಕೈಕೊಟ್ಟುಕಡೆಗೆ ಹೊರಟದ್ದು 4 ಮಂದಿನಾನುಶ್ರೀಕಾಂತ್ ಅಂಕಲ್ಸತೀಶ ಮತ್ತು ರಾಮ್
ತತ್ಕಾಲ್ನಲ್ಲಿ ರೈಲು ಟಿಕೆಟ್ ಸಿಗದೇ ಬಸ್ ಬುಕ್ ಮಾಡಿ ಹೊರಟೆವುರಾತ್ರಿ 10:30 ಕ್ಕೆ ಹೊರಡಬೇಕಿದ್ದ ಬಸ್ ಬೆಂಗಳೂರು ಬಿಟ್ಟದ್ದು ಮಧ್ಯರಾತ್ರಿ 12:30


ಹಾವೇರಿ ಜಿಲ್ಲೆ - KA27 (RTO)
Haveri District Map


ಉತ್ತರ ಕರ್ನಾಟಕದ ಹೆಬ್ಬಾಗಿಲಿನಂತಿರುವ ಹಾವೇರಿ ಜಿಲ್ಲೆ ಅರೆ ಮಲೆನಾಡು
ಬಯಲುಸೀಮೆ ಹಾಗೂ ಅಪ್ಪಟ ಮಲೆನಾಡಿನ ಹವಾಗುಣ ಮತ್ತು ಸಂಸ್ಕೃತಿಯನ್ನು 
ಜಿಲ್ಲೆ ಮೈಗೂಡಿಸಿಕೊಂಡಿದೆ.
ಏಲಕ್ಕಿಯ ಕಂಪುಮೆಣಸಿನಕಾಯಿ ಘಾಟಿಗೆ ಜಿಲ್ಲೆ 
ಹೆಸರುವಾಸಿ
ತುಂಗ, ಭದ್ರಾವರದಾಕುಮದ್ವತಿ ಹಾಗೂ ಧರ್ಮಾ 
ಎಂಬ  ನದಿಗಳು ಜಿಲ್ಲೆಯಲ್ಲಿ ಹರಿಯುತ್ತವೆ.
 


ಪಾವರಿನಳಪುರಿಹಾವರಿ ಎಂಬುದು ಹಾವೇರಿಯ ಪ್ರಾಚೀನ ಹೆಸರುಗಳು.



ಹಾವೇರಿ 1997ರಲ್ಲಿ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾಯಿತು.
ಹಾವೇರಿ ಜಿಲ್ಲೆಯು 7 ತಾಲ್ಲೂಕುಗಳಿಂದ ಕೂಡಿದೆ
1.     ಹಾವೇರಿ 
2.     ರಾಣಿಬೆನ್ನೂರು
3.     ಹಿರೇಕೆರೂರು
4.     ಹಾನಗಲ್
5.     ಶಿಗ್ಗಾಂವ್
6.     ಸವಣೂರು 
7.     ಬ್ಯಾಡಗಿ 

ಬೇಸಾಯ ಜಿಲ್ಲೆಯ ಜನರ ಮೂಲ ಕಸುಬುಮೆಣಸಿನಕಾಯಿಹತ್ತಿ, ಭತ್ತ ಹಾಗೂ ಗೋವಿನಜೋಳ ಪ್ರಮುಖ ಬೆಳೆಗಳುಬ್ಯಾಡಗಿ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆರಾಣಿಬೆನ್ನೂರು ರಾಷ್ಟ್ರೀಯ ಮಟ್ಟದಲ್ಲಿ ಬೀಜೋತ್ಪಾದನೆಗೆ ಹೆಸರುವಾಸಿ.

ಬನ್ನಿ ಹಾವೇರಿಯನ್ನು ಸುತ್ತಿ ಬರೋಣ ...

15-08-2015
ನಮ್ಮ ಬಸ್ ಬೆಳಗ್ಗೆ 5:30ಕ್ಕೆ ಹಾವೇರಿ ತಲುಪಬೇಕಿದ್ದು, 6:00ಕ್ಕೆ ಇನ್ನೂ ರಾಣಿಬೆನ್ನೂರಿನಲ್ಲಿದ್ದೆವುಸರಿ ಇಲ್ಲೇ ಇಳಿದು ಬಿಡೋಣ ಎಂದು ನಿರ್ಧರಿಸಿದೆವುಉತ್ತರ ಕರ್ನಾಟಕದ ಹೆಬ್ಬಾಗಿಲುರಾಣಿಯಾಳಿದ ಊರು ರಾಣಿಬೆನ್ನೂರಿಗೆ ಪಾದಾರ್ಪಣೆ ಮಾಡಿದೆವುಬಸ್ನಿಂದ ಇಳಿದುನಮ್ಮ ರಾಘು ಮಾವ ಹೇಳಿದಂತೆ ತುಂಗಭದ್ರಾ ನದಿಯ ದಂಡೆಯಲ್ಲಿರುವ ಚೌಡಯ್ಯದಾನಪುರಕ್ಕೆ ಹೋಗೋಣವೆಂದು ಅಲ್ಲಿ ಆಟೋ ಒಂದನ್ನು ಎಷ್ಟಾಗುತ್ತದೆಂದು ವಿಚಾರಿಸುತ್ತಿದ್ದೆವು.
ಹಾವೇರಿ ಜಿಲ್ಲೆಗಿನ್ನೂ ಕಾಲಿಟ್ಟು 5 ನಿಮಿಷವಾಗಿಲ್ಲ, ಭಾಷೆಯ ಸೊಗಡು ಕಿವಿಗೆ ಬಿತ್ತು --- "ಪಾಳೆಲ್ ಬಾರ್ಲೇ " ... 2 ಆಟೋದವರು ಬಂದು ನಾವು ವಿಚಾರಿಸುತ್ತಿದ್ದ ಆಟೋಗೆ ಮುತ್ತಿಗೆ ಹಾಕಿದರುಸರಿ ಎಲ್ಲಾ ಜಗ್ಗಾಟ, ಎಷ್ಟು ದುಡ್ಡು, ನಾವು ಯಾವ್ಯಾವ ಜಾಗ ನೋಡ್ಬೇಕು ಅನ್ನೋದೆಲ್ಲಾ ಮಾತಾಡಿ ಪಾಳೇಲಿದ್ದ (ಸರತಿಯಲ್ಲಿದ್ದ) ಮೊದಲ ಆಟೋವನ್ನೇ ಏರಿದೆವು.
ಆಟೋ ಚೌಡಯ್ಯದಾನಪುರದತ್ತ ಹೊರಟಿತು.
ದಾರೀಲಿ ನಮ್ಮ ಕಣ್ಣಿಗೆ ಬಿದ್ದದ್ದು ಕೆರಿಮಲ್ಲಾಪುರ ಹಳ್ಳಿಯ ಸರ್ಕಾರಿ ಶಾಲೆನಮ್ಮ ಸ್ವತಂತ್ರ ದಿನಾಚರಣೆ  ಮಕ್ಕಳೊಟ್ಟಿಗೆ ಎಂದು ನಿರ್ಧರಿಸಿಶಾಲೆಯ ಒಳಗಡೆ ನಡೆದುಮಕ್ಕಳೊಟ್ಟಿಗೆ ರಂಗೋಲಿ ಪುಡಿಯಲ್ಲಿ ಗೆರೆ ಎಳೆಯುವುದರಲ್ಲಿ ಮಗ್ನರಾಗಿದ್ದ ಮೇಷ್ಟರನ್ನುಮಾತನಾಡಿಸಿದೆವು. ಧ್ವಜಾರೋಹಣ 7:30ಕ್ಕೆ  ನೆರವೇರುವುದು, 7ನೇ ತರಗತಿಯಲ್ಲಿ ಒಟ್ಟು 98 ಮಕ್ಕಳಿದ್ದಾರೆಂದು ಹೇಳಿದರು.
Govt. School - Kerimallapura


ಶಾಲೆಯ ಮುಂದಿದ್ದ ಒಂದು ನಲ್ಲಿಯಲ್ಲಿ ಮುಖ ತೊಳೆದುಕೊಂಡೆವು. ಅಲ್ಲಿ ಜನರು ನೀರನ್ನು ಸಾಗಿಸಲು ಒಂದು ಕೈ ವಾಹನವನ್ನು ಉಪಯೊಗಿಸುತ್ತಾರೆ. 
Kerimallapura
ಮಕ್ಕಳಿಗೆ ಹಂಚಲು ಚಾಕೊಲೇಟ್ ತಂದಿರುವುದಾಗಿ ಸತೀಶ ಹೇಳಿದನುಇನ್ನು ಸಮಯ ಇತ್ತಲ್ಲ, ನಾವು ಹತ್ತಿರದ ಚಿಕ್ಕ ಪೆಟ್ಟಿಗೆ ಅಂಗಡಿಗಳಲ್ಲಿ ಒಬ್ಬರಿಗೆ 100 ಪೆನ್ ಮತ್ತು ಪೆನ್ಸಿಲ್ ಗಳನ್ನ ಕೊಂಡು ಒಟ್ಟುಮಾಡಿದೆವುಹಾಗೆಯೇ ಒಂದು ಅಂಗಡಿಯವರಿಗೆ ಯಾರದಾದರೂ ಮನೆಯ ಶೌಚಾಲಯ ಉಪಯೋಗಿಸಬಹುದೇ? ಎಂದು ಕೇಳಿದಾಗ,  ಅಂಗಡಿಯ ಹಿಂಬದಿಯಲ್ಲಿದ್ದ ಕುಮಾರ್ ಕಾಕೋಳ್ ಅವರ ಮನೆಗೆ ಕರೆದುಕೊಂಡು ಹೋದರು ಮನೆಗೆ ಕಾಲಿಟ್ಟೊಡನೆ ಏನೋ ಒಂದು ಆಕರ್ಷಣೆಏಕ ಪಡಸಾಲೆಬಲಗಡೆಯಲ್ಲಿ ಒಂದರ ಪಕ್ಕದಲ್ಲಿ ಮತ್ತೊಂದರಂತೆ ಕೋಣೆಗಳುನನ್ನ ಮಾಡಬೇಕಿದ್ದ ಕೆಲಸ ಮುಗಿಸಿಕೊಂಡುರಾಮ್ನನ್ನು ಮನೆಯ ಫೋಟೋ ತೆಗೆಯಲು ಕರೆದೆ ಮನೆಯ ಮಂದಿ ನಮ್ಮನ್ನು ಸಂತೋಷವಾಗಿ ಬರಮಾಡಿಕೊಂಡು ಟೀ ಕೊಡುತ್ತೇವೆಂದರುಉಳಿದ ಇನ್ನಿಬ್ಬರನ್ನೂ ಕರೆದೆನುಎಲ್ಲರೂ ಕುಡಿದು, ಮನೆಯವರೊಟ್ಟಿಗೆ ಫೋಟೋ ತೆಗೆಸಿಕೊಂಡು, ಅವರ ಅನುಮತಿ ಪಡೆದು ನಾನು ನನ್ನ ಸ್ನಾನವನ್ನೂ ಅಲ್ಲೇ ಮುಗಿಸಿದೆ.
Kerimallapura

ನಂತರ ಶಾಲೆಯ ಹತ್ತಿರ ಬಂದು ನೋಡಿದರೆ ಧ್ವಜಾರೋಹಣ ಮುಗಿದು ಮಕ್ಕಳು ಪಥಸಂಚಲನೆ ಮಾಡುತ್ತಾ ಶಾಲೆಯಿಂದ ಹೊರಬರುತ್ತಿದ್ದಾರೆ! ನನಗೆ ಅಷ್ಟೊತ್ತೂ ತಲೇಲಿ ಕುಣೀತಿದ್ದ ಮಕ್ಕಳೊಟ್ಟಿಗಿನ ಸ್ವತಂತ್ರ ದಿನಾಚರಣೆ ಒಮ್ಮೆಲೇ ಕುಸಿದು ಬಿತ್ತುತಕ್ಷಣ ಯಾರೋ ಹೇಳಿದರು, ಅಲ್ಲಿ ರೈತ ಸಹಕಾರ ಸಂಘದ ಮುಂದೆ ಈಗ ಧ್ವಜಾರೋಹಣ ನಡೆಯುತ್ತದೆ ಬೇಗ ಹೋಗಿ... ಅವರ ಮಾತು ಮುಗಿಯುವಷ್ಟರಲ್ಲಿ ನಾನು ಅತ್ತ ಓಡುತ್ತಿದ್ದೆಹಿಂದಿನಿಂದ ರಾಮ್ ಕೂಗುತ್ತಿದ್ದ ... ನಿಧಾನ ಕಣೇ !!!
ನಾವು ರೈತ ಸಹಕಾರ ಸಂಘದ ಹತ್ತಿರ ಹೋಗುವಷ್ಟರಲ್ಲಿ ಮೇಷ್ಟ್ರು ಸಂಘದ ಮುಂದಿನ ಕಂಬಕ್ಕೆ ಧ್ವಜವನ್ನು ಕಟ್ಟಿ ಏರಿಸುತ್ತಿದ್ದರು. "ಅಬ್ಬಾಎನ್ನುವ ಸಮಾಧಾನಸುಮಾರು 15 ವರ್ಷಗಳ ಹಿಂದೆ ಹೀಗೆ ಬೆಳಗ್ಗೆ ಬೇಗ ಎದ್ದುಸ್ನಾನ ಮಾಡಿಇಸ್ತ್ರಿ ಮಾಡಿದ ಸಮವಸ್ತ್ರ ತೊಟ್ಟು ಶಾಲೆಯ ಹತ್ತಿರ ಓಡುತ್ತಿದ್ದ ಹಳೆಯ ನೆನಪು ಕಣ್ಣ ಮುಂದೆ ಹಾದು ಹೋಯಿತು. "ಜನ ಗಣ ಮನಶುರುವಾಯಿತುಪಕ್ಕದಲ್ಲಿ ಯಾರೋ ಎತ್ತರ ಧ್ವನಿಯಲ್ಲಿ ಹಾಡುತ್ತಿದ್ದಾರೆ. ನೋಡಿದರೆ ಶ್ರೀಕಾಂತ್ ಅಂಕಲ್ !!! ಮಕ್ಕಳೊಟ್ಟಿಗೆ ಹಾಡುವುದರಲ್ಲಿ ಅದೇನು ಉತ್ಸಾಹ.
ಧ್ವಜಾರೋಹಣದ ನಂತರ ಮಕ್ಕಳಿಗೆ ಚಾಕೊಲೇಟ್‌ಗಳನ್ನು ಹಂಚಿದೆವುನಂತರ ಸಮೂಹ ಗಾಯನ... "ಭಾರತಿ ನಿನ್ನ ಅಡಿಗಳಿಗೆ ಪೊಡಮಡುವೆ". ಮಕ್ಕಳಿಗೆಲ್ಲ ಪೆನ್ಸಿಲ್ಪೆನ್‌ಗಳನ್ನು ಹಂಚಿ ಅಲ್ಲಿಂದ ಬೀಳ್ಕೊಂಡು ಚೌಡಯ್ಯದಾನಪುರಕ್ಕೆ ಹೊರಟೆವು.

Govt. School - Kerimallapura

Govt. School - Kerimallapura
Govt. School - Kerimallapura


ಬೆಳಗ್ಗೆ 9:30
ಚೌಡಯ್ಯದಾನಪುರ - ಮುಕ್ತೇಶ್ವರ ದೇವಾಲಯ
Mukteshwara Temple - Coudayyadanapura

Mukteshwara Temple - Coudayyadanapura

ತುಂಗಭದ್ರಾ ನದಿಯ ದಂಡೆಯ ಮೇಲಿರುವ 12ನೇ ಶತಮಾನದ  ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆರಾಮ್ಶ್ರೀಕಾಂತ್ ಅಂಕಲ್ಸತೀಶ ಸ್ನಾನ ಮಾಡಲು ನದಿ ತೀರಕ್ಕೆ ಹೋದರುನನ್ನ ಗಮನ ಅಲ್ಲಿದ್ದ ಶಾಸನದತ್ತ ಹರಿಯಿತುಶಾಸನದಲ್ಲಿರುವ ಬರಹ ನೋಡಿ ಅದು ಯಾವ ಶತಮಾನದ್ದೆಂದು ಹೇಗೆ ಅಂದಾಜಿಸಬಹುದು ಎಂದು ನಾನು ಆಟೋ ಚಾಲಕರಾದ ವಿನೋದ್‌ರವರಿಗೆ ತೋರಿಸಿ ಕೊಡುತ್ತಿದ್ದೆಅವರು ನನಗೆ "ಅಕ್ಷರವನ್ನು ಹುಡುಕಿ ತೋರಿಸಿ, ಈಗಿರುವ ಅಕ್ಷರಕ್ಕೂಆಗಿನದಕ್ಕೂ ವ್ಯತ್ಯಾಸ ತಿಳಿಯುತ್ತಿದ್ದರುಪಕ್ಕದಲ್ಲೇ ಇದ್ದ ಭಗ್ನವಾಗಿದ್ದ ವಿಗ್ರಹ ಒಮ್ಮೆಲೇ ಆಕರ್ಷಿಸಿತುವ್ಯಕ್ತಿಯ ಗುದದ್ವಾರದಿಂದ ಹೊರಟಂತಿರುವ ತ್ರಿಶೂಲದ ಕೆತ್ತನೆಶ್ರೀನಿವಾಸ್ ಮೇಷ್ಟ್ರಿಗೆ ಕರೆ ಮಾಡಿ ಕೇಳಿದಾಗ, ಅವರು ಅದನ್ನು ನೋಡಿದರಷ್ಟೇ ಅದನ್ನು ಅರ್ಥೈಸಿ ಹೇಳಲು ಸಾಧ್ಯ ಎಂದು ಹೇಳಿದರುನಂತರ ಅವರ ಮಗಳು ಅನನ್ಯಗೆ  ವಿಗ್ರಹದ ಫೋಟೋ ತೆಗೆದು WhatsApp ಮಾಡಿದೆಅವರು ಅದನ್ನು ನೋಡಿ, ಅದು ವೀರಭದ್ರನ ಮೂರ್ತಿ ಎಂದುಅದು ತ್ರಿಶೂಲವಲ್ಲ, ಪಂಚೆ ಎಂದು ಹೇಳಿದರು. :)
Mukteshwara Temple - Coudayyadanapura

ದೇವಸ್ಥಾನದ ಒಳಗಡೆ ಹೋದೊಡನೆ ಎದುರಿಗೆ ಶಿವಲಿಂಗಎಡಗಡೆ ಗಣೆಶ ಮತ್ತು ಬಲಗಡೆಗೆ ಚಾಮುಂಡೇಶ್ವರಿಯ ವಿಗ್ರಹಗಳು ಚಾಮುಂಡೇಶ್ವರಿಯ ವಿಗ್ರಹದಲ್ಲಿ ಅದೆಂಥದೋ ಆಕರ್ಷಣೆದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಅಲ್ಲಿಂದ ಗಳಗನಾಥದತ್ತ ಮುಖ ಮಾಡಿದೆವು.
ಸೊಗಡು (Nativityಇರ್ಬೇಕು ಅಂತ ದಾರಿಯಲ್ಲಿ ಗುತ್ತಲ್ ಎಂಬ ಸ್ಥಳದಲ್ಲಿ ಮಿರ್ಚಿ-ಮಂಡಕ್ಕಿ ತಿಂದೆವು.
Mirchi Mandakki - Guttala

ಬೆಳಗ್ಗೆ 11:30
ಗಳಗನಾಥ - ಶ್ರೀ ಗಳಗೇಶ್ವರ ದೇವಾಲಯ
Galageshwara Temple - Galaganatha
Galageshwara Temple - Galaganatha

Galageshwara Temple - Galaganatha

11ನೇ ಶತಮಾನದ  ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆ. ಧರ್ಮಾವರದಾಕುಮುದ್ವತಿತುಂಗಾ ಮತ್ತು ಭದ್ರಾ ...  ಐದು ನದಿಗಳ ಸಂಗಮದಲ್ಲಿ ಗಳಗನಾಥ ದೇವಾಲಯವಿದೆ ದೇವಾಲಯವು ವಾಸ್ತು ವಿನ್ಯಾಸದಲ್ಲಿ ಹಂತ ಹಂತವಾಗಿ ಕಿರಿದಾಗುತ್ತಾ ಹೋಗುವ ಪಿರಮಿಡ್ ಅನ್ನು ಹೋಲುತ್ತದೆ.
 ಸ್ಥಳಕ್ಕೆ ಮುಂಚೆ ಫಲ್ಗುಣಿ ಎಂಬ ಹೆಸರಿತ್ತೆಂದು ಅಲ್ಲಿ ಸಿಕ್ಕ ಒಬ್ಬ ಮಾರ್ಗದರ್ಶಿಗಳು ಹೇಳಿದರು.
ಪಕ್ಕದಲ್ಲೇ ಇದ್ದ ಅರ್ಚಕರ ಮನೆಗೆ ಹೋಗಿ ವಿಚಾರಿಸಿದಾಗ, ಅವರು ಬೆಳಗ್ಗೆಯೇ ಪೂಜೆ ಮುಗಿಸಿ ಪರ ಊರಿಗೆ ಹೋಗಿದ್ದಾರೆಂದು ಹೇಳಿದರು.
ಮಧ್ಯಾಹ್ನ 12:30
ಹಾವನೂರು - ದ್ಯಾವಮ್ಮನ ಗುಡಿ
Dyavamma Temple - Havanuru


ಆಟೋ ನಿಲ್ಲಿಸಿ  ದೇವಾಲಯದ ಹತ್ತಿರ ಬಂದೊಡನೆ ನಮ್ಮ ಕಣ್ಣಿಗೆ ಬಿದ್ದದ್ದು  ಗೋಡೆಯ ಮೇಲಿನ ಬರಹ.
Dyavamma Temple - Havanuru


 ವಿಜ್ಞಾನ ಯುಗದಲ್ಲೂ ಇಂತಹ ಮೂಢನಂಬಿಕೆಗಳುಆಚರಣೆಗಳು ಇವೆಯೇ ಎಂದು ಆಶ್ಚರ್ಯವಾಯಿತುದೇವಾಲಯದ ಒಳಗೆ ನಡೆದೆವು. ವರ್ಷಕ್ಕೆ ಒಂದು ಬಾರಿ ಮಾತ್ರ ಪೆಟ್ಟಿಗೆ ತೆಗೆದು, ಅದರೊಳಗಿರುವ ದೇವತೆಗೆ ಪೂಜೆ ಮಾಡುವುದು ಇಲ್ಲಿಯ ಪ್ರತೀತಿದರ್ಶನ ಮುಗಿಸಿ ಹೊರ ಬಂದಾಗ ಅಲ್ಲಿ ದೇವಾಲಯದ ಜಗಲಿಯ ಮೇಲೆ ಒಬ್ಬಾಕೆ ಕೂತಿದ್ದರು. 14 ದಿನಗಳಿಂದ ಮೌನ ವ್ರತದಲ್ಲಿರುವ ಈಕೆ ಯಾರಾದರು ಹಣ್ಣು ಮತ್ತೇನಾದರು ಕೊಟ್ಟರೆ ಮಾತ್ರ ಸ್ವಿಕರಿಸುತ್ತಾರಂತೆಉತ್ತರ ಕರ್ನಾಟಕದಿಂದ ಬಂದಿರುವ  ಹೆಣ್ಣುಮಗಳು ಇನ್ನೂ 4 ದಿನ ಉಳಿಯುವುದಾಗಿ ಹೇಳಿದ್ದರೆಂದು ಅಲ್ಲಿಯ ಅರ್ಚಕರು ತಿಳಿಸಿದರು( ಭಕ್ತಿಯ ರೂಪ ಪ್ರತಿಯೊಬ್ಬರಲ್ಲೂ ಭಿನ್ನ ).
Dyavamma Temple - Havanuru


ಅಲ್ಲಿಂದ ಹರಳಳ್ಳಿ ಕಡೆಗೆ ಸಾಗುತ್ತಿರುವಾಗ ಧ್ವನಿವರ್ಧಕದಲ್ಲಿ ಜಾನಪದ ಹಾಡು ಕೇಳಿ ಬರುತ್ತಿತ್ತುಆಟೋ ವಿನೋದ್ರವರನ್ನು ಅದೇನೆಂದು ವಿಚಾರಿಸಿದಾಗ ಸತ್ತವರ ಮನೆಯಲ್ಲಿ ಬೀಗರು ಬರುವವರೆಗೂ ಹಾಗೆ ರಾತ್ರಿ ಪೂರ ಹಾಡುತ್ತಾರೆಂದು ಹೇಳಿದರುನೇಟಿವಿಟಿ ಅಂತ ತಲೆಗೆ ತಿಕ್ಕಲು ಹತ್ತಿದ್ದ ನಾನು ಅಲ್ಲಿಗೆ ಹೋಗಿ ನೋಡೋಣ ಎಂದು ಕೇಳಿದೆ. "ಮೇಡಂ ನಿಮ್ಮೂರಲ್ಲಿ DJ ನೋಡಿರ್ತೀರಲ್ಲ, ಅದೇ ತರ ಅಂದ್ಕೊಂಡ್ರಾನೆಂಟರು ಬಿಟ್ಟು ಬೇರೆ ಜನ ಹೇಗೆ ಹೋಗೋಕ್ಕಾಗತ್ತೆ?" ಅಂದುಬಿಟ್ಟ್ರು :(
"ಅಜ್ಜಿ ಹೊಗ್ಬಿಟ್ಟ್ಯಲ್ಲೇಅಂತ ನಾನು ಅಲ್ಲಿ ನಟನೆ ಮಾಡಿ ತೋರಿಸಿದೆ. ಆಮೇಲೆ ನಾನು ವಿನೋದ್ ಹತ್ರ ಸ್ಕ್ರೀನ್ ರಿಜೆಕ್ಟ್ ಆದೆ ಅನ್ನೋದು ಬೇರೆ ಮಾತು.
Vinod Auto - Ranibennur

ಮದ್ಯಾಹ್ನ 12:50
ಹರಳಳ್ಳಿ - ಸೋಮೇಶ್ವರ ದೇವಾಲಯ
 ಜಾಗಕ್ಕೆ ವಿಕ್ರಮಪುರ ಎಂಬ ಹೆಸರಿತ್ತೆಂದು ಅಲ್ಲಿಯ ಶಾಸನವೊಂದು ಹೇಳುತ್ತದೆವರದಾ ನದಿಯ ದಂಡೆಯ ಮೇಲಿರುವ  ದೇವಾಲಯವು 11-12 ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ್ದು.
Someshwara Temple - Haralalli

ಮದ್ಯಾಹ್ನ 2:10
ದೇವರಗುಡ್ಡ - ಮಾಲತೇಶ - ಮಾಲಸ್ವಾಂಬ ದೇವಾಲಯ
ದೇವಾಲಯ ಪ್ರವೇಶಿಸಿದಾಗ ಅಲ್ಲಿಟ್ಟಿರುವ 2 ಜೊತೆ ದೊಡ್ಡ ಚಪ್ಪಲಿಗಳು ನನ್ನನ್ನು ಆಕರ್ಷಿಸಿದವುಅದನ್ನು ನೋಡಿಕೊಳ್ಳುತ್ತಿದ್ದ ಅಜ್ಜಿಯೊಬ್ಬರನ್ನು ವಿಚಾರಿಸಿದಾಗ, ಅದು ಮಾಲತೇಶ - ಮಾಲಸ್ವಾಂಬ ದೇವರುಗಳ ಚಪ್ಪಲಿಗಳೆಂದುಇದು ವರ್ಷ-ವರ್ಷವೂ ಸವೆಯುತ್ತದೆ ಮತ್ತು ಹರಕೆ ಕಟ್ಟಿದ ಜನರು ದೇವರಿಗೆ ಪ್ರತಿ ದಸರಾ ಹಬ್ಬಕ್ಕೂ ಹೊಸ ಜೊತೆಗಳನ್ನು ಮಾಡಿಸಿ ಕೊಡುತ್ತಾರೆಂದು ಹೇಳಿದರುಒಳ ನಡೆದಾಗ ಗೊರವಯ್ಯಗಳು ಅಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದರು.
Devaragudda

Devaragudda

 ದೇವಸ್ಥಾನದ ಚರಿತ್ರೆಯನ್ನು ಮಾಲತೇಶ್ ಪೂಜಾರ್ ಎಂಬ ಅಲ್ಲಿಯ ಪುರೋಹಿತರು ವಿವರಿಸಿದ್ದು ಹೀಗೆ.
ಮಣಚಾಲ ಪರ್ವತವೆಂಬ ಪ್ರದೇಶದಲ್ಲಿ ಮಲ್ಲಾಸುರಮಣಿಕಾಸುರ ಎಂಬ ಇಬ್ಬರು ರಾಕ್ಷಸರು ಜನರಿಗೆ ತೊಂದರೆ ಕೊಡುತ್ತಿದ್ದುಈಶ್ವರನು ಜ್ಯೋತಿರೂಪತೀರ್ಥರೂಪ ಆಗಿ  ಇಬ್ಬರು ರಾಕ್ಷಸರನ್ನು ಸಂಹಾರ ಮಾಡಿದನುಮಾಲತೇಶ -ಮೈಲಾರಲಿಂಗ ದೇವರುಗಳು ಅಣ್ಣ ತಮ್ಮಂದಿರುಮೈಲಾರಲಿಂಗವು ಬಳ್ಳಾರಿ ಜಿಲ್ಲೆಗೆ ಸೇರಿರುವುದರಿಂದ, ನಾವು  ಸ್ಥಳವನ್ನು ಬಳ್ಳಾರಿ ಜಿಲ್ಲಾ ದರ್ಶನಕ್ಕೆ ಹೋದಾಗ ನೋಡುವುದೆಂದು ತೀರ್ಮಾನಿಸಿದೆವು.
ಮಾರ್ಗಶಿರ ಮಾಸದಂದು ಶಿಖರದ ಮೇಲೆ 2 ನಕ್ಷತ್ರಗಳು ಕಾಣಿಸುತ್ತವೆ ಎಂದು ಹೇಳಿದರು.
Devaragudda

ಅಲ್ಲಿಂದ ರಾಣಿಬೆನ್ನೋರಿಗೆ ಬರುವಷ್ಟರಲ್ಲಿ ಮಧ್ಯಾಹ್ನ 3:30ಹೊಟ್ಟೆ ತಾಳ ಹಾಕುತ್ತಿತ್ತುಗೌರಿಶಂಕರ ರಿಫ಼್ರೆಷ್ಮೆಂಟ್‌ನಲ್ಲಿ ಜೋಳದ ರೊಟ್ಟಿಯ ಪುಷ್ಕಳ ಭೋಜನ ಮುಗಿಸಿ, ಅಷ್ಟರಲ್ಲಾಗಲೇ ನಮ್ಮ ಸ್ನೇಹಿತರಾಗಿಬಿಟ್ಟಿದ್ದ ಆಟೋ ವಿನೋದ್ರವರನ್ನು ಬೀಳ್ಕೊಂಡು ಬ್ಯಾಡಗಿಯ ಬಸ್ ಹತ್ತಿದೆವು.
Ranibennur
ಬ್ಯಾಡಗಿಯಲ್ಲಿ ಇಳಿದು, ಅಲ್ಲಿಯ ಮೆಣಸಿನಕಾಯಿಯ ಸಂತೆಯನ್ನು ನೋಡಿಮತ್ತೊಂದು ಆಟೋ ಹಿಡಿದು ಕಾಗಿನೆಲೆಯತ್ತ ಹೊರಟೆವು.
Chilly Market - Bydagi

ಸಂಜೆ 6:15 
ಕಾಗಿನೆಲೆ
ಕನಕದಾಸರು ತಮ್ಮ ಆರಾಧ್ಯ ದೈವ ಆದಿಕೇಶವನನ್ನು ತಮ್ಮ ಹುಟ್ಟೂರಾದ ಬಾಡದಿಂದ ತಂದು ಸ್ಥಾಪಿಸಿದ ಸ್ಥಳ.
ದ್ವಾರದ ಹತ್ತಿರವೇ ಕನಕದಾಸರ ಸುಂದರ ಮೂರ್ತಿಯಿರುವ ಧ್ಯಾನಮಂದಿರವಿದೆಬಲಬದಿ ಮತ್ತು ಎಡಬದಿಯಲ್ಲಿ ಕನಕದಾಸರ "ಕುಲ ಕುಲ ಕುಲವೆಂದು ಹೊಡೆದಾಡದಿರಿ" ಮತ್ತು "ನೀ ಮಾಯೆಯೊಳಗೋ" ಹಾಡಿನ ಸಾಹಿತ್ಯವನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದಾರೆಇದನ್ನು ನೋಡಿಕೊಂಡು ದೇವಸ್ಥಾನದತ್ತ ಹೊರಟೆವು.
Kaginele

Kaginele

ಆದಿಕೇಶವ ದೇವಾಲಯ:
ಸುಮಾರು 600 ವರ್ಷಗಳಷ್ಟು ಹಳೆಯದಾದ  ದೇವಾಲಯವನ್ನು ಪ್ರವೇಶಿಸಿದೊಡನೆ ನಮಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಬಂದಿದ್ದ ಒಂದು ತಂಡ ಕಾಣಿಸಿತುಅವರೆಲ್ಲರೂ ಕನಕದಾಸರ ಪದವನ್ನು ಗುನುಗುತ್ತಿದ್ದರುಅಲ್ಲಿನ ಪೂಜಾರಿಗಳು ನಮಗೆ ಕನಕದಾಸರು ಉಪಯೋಗಿಸುತ್ತಿದ್ದ ಶಂಖ ಮತ್ತು ಅಕ್ಷಯಪಾತ್ರೆ ಎಂದು ಹೇಳಲಾಗುವ ಮರದ ಪಾತ್ರೆಯನ್ನು ತೋರಿಸಿದರುಅಲ್ಲಿ ತ್ರಿಮೂರ್ತಿಗಳಂತಿದ್ದ ಆಂಜನೇಯ ಮೂರ್ತಿಗಳನ್ನು ತೋರಿಸಿ ವರ್ಣಿಸಿದರು. 
ಸಾತೇನಹಳ್ಳಿ-ಶಾಂತೇಶ
ಕದರಮಂಡಲಗಿ- ಕಾಂತೇಶ
ಶಿಖಾರಿಪುರ - ಭ್ರಾಂತೇಶ/ಹುಚ್ಚೇಶ
 ಮೂರೂ ದೇವಸ್ಥಾನಗಳನ್ನು ಒಟ್ಟಿಗೆ ನೋಡಿದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ ಬರುತ್ತದೆ ಮತ್ತು ಇಲ್ಲಿಯೇ ನೀವು  ಮೂರೂ ಮೂರ್ತಿ ರೂಪಗಳನ್ನು ನೋಡಬಹುದು ಎಂದು ತೋರಿಸಿದರು.
ನರಸಿಂಹ ದೇವರ ವಿಗ್ರಹದ ಪಕ್ಕದಲ್ಲಿ ಲಕ್ಷಿ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ .
Adikeshava Temple - Kaginele
Kaginele

ಅಲ್ಲಿಯ ಒಂದು ಮಠದ ವಿದ್ಯಾರ್ಥಿ ನಿಲಯದಲ್ಲಿ ನಮ್ಮ ಊಟವನ್ನು ಮುಗಿಸಿಯಾತ್ರಿನಿವಾಸದಲ್ಲಿ ತಂಗಿದೆವು. ಅದ್ಧೂರಿ ವೆಚ್ಚದಲ್ಲಿ "ಯಾತ್ರಿ ನಿವಾಸಅನ್ನು ನಿರ್ಮಿಸಲಾಗಿದೆ. 350ರೂಗಳಿಗೆ ಒಳ್ಳೆಯ ಕೋಣೆ ಸಿಕ್ಕಿತುಬಿಸಿ ನೀರಿಗಾಗಿ ಗೀಸೆರ್ ಕೂಡ ಇದೆ.

16-08-2015
ಬೆಳಗ್ಗೆ 6:45ಕ್ಕೆ ಕಾಗಿನೆಲೆಯಿಂದ ಹಾವೇರಿಯ ಕಡೆಗೆ ಹೊರಟೆವು

ಬೆಳಗ್ಗೆ 7:45
ಹಾವೇರಿ - ಪುರ ಸಿದ್ಧೇಶ್ವರ ದೇವಾಲಯ
ಉಸುಕು ಕಲ್ಲುಗಳಿಂದ ನಿರ್ಮಿತವಾಗಿರುವ  ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯದ್ದಾಗಿದೆದೇವಾಲಯದ ದ್ವಾರವು ಪಶ್ಚಿಮಾಭಿಮುಖವಾಗಿದ್ದುಶಾಸನದಲ್ಲಿ  ಇಂದ್ರೇಶ್ವರ ಎಂಬ ಹೆಸರಿನಿಂದ ಉಲ್ಲೇಖಿತವಾಗಿದೆದೇವಾಲಯದ ಕಂಬಗಳ ಮೇಲೆ ಶಾಸನದ ಕೆತ್ತನೆಯಿದೆ. ಗರ್ಭಗುಡಿಯಲ್ಲಿ ಲಿಂಗವಿದ್ದುಎದುರಿಗೆ ನಂದಿ ವಿಗ್ರಹವಿದೆ ಮತ್ತು ಅದರ ಹಿಂದೆ ಗಣೇಶನ ವಿಗ್ರಹವಿದೆದೇವಾಲಯದ ಪ್ರದಕ್ಷಿಣೆ ಮಾಡುತ್ತಾ ಬರುತ್ತಿರುವಾಗ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಿರುವ ಅಪ್ಸರೆಶಾಲಭಂಜಿಕೆಯ ಕೆತ್ತನೆ ಕಣ್ಣಿಗೆ ಬಿತ್ತುಪಕ್ಕದಲ್ಲಿದ್ದ ಸತೀಶನಿಗೆ ಅದನ್ನು ವಿವರಿಸುತ್ತಾ ಇದೇ ರೀತಿಯಾದ ಕೆತ್ತನೆಯು ಬೇಲೂರಿನಲ್ಲೂ ಸಹ ಕಾಣಬಹುದೆಂದು ಮಾತನಾಡುತ್ತಿದ್ದೆವುಆದರೆ ಆಶ್ಚರ್ಯವೆನಿಸಿದ್ದು ಬೇಲೂರಿನ ಚೆನ್ನಕೇಶವ ದೇವಾಲಯ ನಿರ್ಮಾಣವಾಗಿದ್ದು ಕಲ್ಯಾಣ ಚಾಲುಕ್ಯರ ನಂತರ ಅಂದರೆ 12-13ನೇ ಶತಮಾನ ಶಾಲಭಂಜಿಕೆಯ ಕೆತ್ತನೆ ಇಲ್ಲಿ ಹೇಗಿದೆ ಎಂಬ ಅನುಮಾನ. ತಲೇಲಿ ಏನೇ ಹೊಸ ಹುಳ ಹೊಕ್ಕರೂ ಪರಿಹಾರ ಮಾಡೋಕ್ಕೆ ಇದಾರಲ್ಲ ಶ್ರೀನಿವಾಸ್ ಸರ್, ಅವರಿಗೆ ಕರೆ ಮಾಡಿ ಕೇಳಿದೆಹೊಯ್ಸಳ ಶೈಲಿ ಬೆಳೆದಿದ್ದೇ ಕಲ್ಯಾಣ ಚಾಲುಕ್ಯರ ಕಾಲದಿಂದಆಮೇಲೆ ಅವರು ಅದನ್ನ ಸುಧಾರಣೆ (Improvisation) ಮಾಡಿದರು ಎಂದು ಹೇಳಿದರು.
ಪಕ್ಕದಲ್ಲೇ ಇರುವ ಮತ್ತೊಂದು ಗುಡಿಯಲ್ಲಿ ಹಿರಣ್ಯಕಶಪುವಿನ ಹೊಟ್ಟೆ ಬಗೆಯುತ್ತಿರುವ ಉಗ್ರ ನರಸಿಂಹನ ವಿಗ್ರಹವಂತೂ ಅದ್ಭುತ.
Siddeshwara Temple - Haveri
Siddeshwara Temple - Haveri

Siddeshwara Temple - Haveri
Siddeshwara Temple - Haveri

ರೇವಣಸಿದ್ಧೇಶ್ವರ ಹೋಟೆಲ್‌ನಲ್ಲಿ ಉಪಹಾರ ಮುಗಿಸಿಆಟೋದವರ ಹತ್ತಿರ ಸಂಜೆವರೆಗೂ ಎಂದು ಮಾತನಾಡಿಬೆಂಗಳೂರಿಗೆ ಟಿಕೆಟ್ ಕಾಯ್ದಿರಿಸಿ (Booking) ಬಂಕಾಪುರದ ಕಡೆಗೆ ಹೊರಟೆವು.

ಬೆಳಗ್ಗೆ 11:05
ಬಂಕಾಪುರ - ನವಿಲುಧಾಮ
ಸಣ್ಣ ಕಾಡಿನಂತಿದ್ದ  ನವಿಲುಧಾಮದೊಳಗೆ ಹೋದರೆ ನವಿಲು ಕೇಕೆ ಹಾಕುವ ಸದ್ದುಹುಡುಕಿ ಹೊರಟರೆ ಅಲ್ಲೆಲ್ಲೋ ಕುಳಿತ ನವಿಲುಗಳು ಕಣ್ಣಿಗೆ ಕಂಡವುವಿಚಿತ್ರವೆಂದರೆ ಕಂಡ ಅಷ್ಟೂ ನವಿಲುಗಳಲ್ಲಿ ಒಂದೂ ಹೆಣ್ಣು ನವಿಲಿರಲಿಲ್ಲ!

ಮಧ್ಯಾಹ್ನ 12:05
ಬಾಡ - ಕನಕದಾಸರ ಹುಟ್ಟೂರು.
ಅಲ್ಲಿಯ ಕನಕದಾಸ ಮಂದಿರಕ್ಕೆ ಹೋಗಿ ನಮಸ್ಕರಿಸಿ ಬಂದೆವು. ಪಕ್ಕದಲ್ಲೇ ಕನಕದಾಸರ ಪೂರ್ವಜರು ಇದ್ದರೆಂದು ಹೇಳಲಾಗುವ ಸ್ಥಳದಲ್ಲಿ ವಿಜಯನಗರ ಶೈಲಿಯಲ್ಲಿ ಒಂದು ಪುಟ್ಟ ಅರಮನೆಯನ್ನು ನಿರ್ಮಿಸಲಾಗಿದೆ.
ಪ್ರವೇಶ ಚೀಟಿ (ಒಬ್ಬರಿಗೆ 10ರೂ.) ಪಡೆದು ಒಳ ಪ್ರವೇಶಿಸಿದರೆ ನಿಜವಾದ ಅರಮನೆಯೊಳಗೆ ಕಾಲಿಟ್ಟ ಅನುಭವ
Palace @ Bada, Haveri
2013 ರಲ್ಲಿ ತೇಜವಂತಿಬೆಂಗಳೂರು ಇವರ ಕೈಯಲ್ಲಿ ಅರಳಿದ ಗೋಡೆಗಳ ಮೇಲೆ ಹಾಕಿರುವ ಕನಕದಾಸರ ಜೀವನ ಚರಿತ್ರೆಯ ಅಸಲಿ ವರ್ಣಚಿತ್ರಗಳು ಗಮನ ಸೆಳೆದವು. ಉಬ್ಬು ಚಿತ್ರಕ್ಕೆ ತೈಲ ವರ್ಣ ಬಳಿದು ಮಾಡಿರುವ ಕಲೆ ಅತ್ಯಾಕರ್ಷಕವಾಗಿದೆ. ವರ್ಣಚಿತ್ರಗಳಲ್ಲಿ ಚಿತ್ರಿತ ಸನ್ನಿವೇಶ/ ವ್ಯಕ್ತಿಗಳ ಅಳತೆಗಳು ( ದೂರ, ಎತ್ತರ, ದಪ್ಪ, ಅಗಲ, ಇತ್ಯಾದಿ) ಸಹಜತೆಯಿಂದ ಕೂಡಿದ್ದು, ಕಣ್ಣ ಮುಂದೆ ನಡೆಯುತ್ತಿರುವಂತೆ, ನೋಡುಗರ ಮನಸ್ಸಿನಲ್ಲಿ ಸನ್ನಿವೇಶದ ಭಾವವನ್ನು ಮೂಡಿಸುವಲ್ಲಿ ಶಕ್ತವಾಗಿದೆ ಎಂದು ಸತೀಶ ಹೇಳುತ್ತಿದ್ದ.
Palace @ Bada, Haveri

Palace @ Bada, Haveri

ಮಧ್ಯಾಹ್ನ 2:10
ಶಿಶುವಿನಹಾಳ - ಶರೀಫ಼ಗಿರಿ
ಬೇವಿನ ಮರದ ಕೆಳಗೆ ಪದ್ಮಾಸನದಲ್ಲಿ ಕುಳಿತ ಎರಡು ಅಮೃತ ಶಿಲೆಯ ವಿಗ್ರಹಗಳುಶಿಶುನಾಳ ಶರೀಫ ಮತ್ತು ಅವರ ಗುರುಗಳಾದ ಗುರು ಗೋವಿಂದರದುಧರ್ಮ ಸಮನ್ವಯತೆಯ ಪ್ರತೀಕವೆಂಬಂತೆ ಹಿಂದೂ ಮತ್ತು ಮುಸಲ್ಮಾನರು ಒಟ್ಟಿಗೆ ಪೂಜಿಸುವ ಸ್ಥಳಎಡಗಡೆ ಮುಸಲ್ಮಾನ ಪೂಜಾರಿಯೊಬ್ಬರು (ಅವರನ್ನು ಏನೆನ್ನುತ್ತಾರೋ ನನಗೆ ಸರಿಯಾಗಿ ಗೊತ್ತಿಲ್ಲಎಲ್ಲರಿಗೂ ಊದುಬತ್ತಿಯ ಹೊಗೆಯಲ್ಲಿ, ನವಿಲು ಗರಿಗಳ ಗುಚ್ಚದಿಂದ ಆಶೀರ್ವಾದ ಮಾಡುತ್ತಿದ್ದರು ಮತ್ತು ಬಲಗಡೆಯಲ್ಲಿ ಹಿಂದು ರೀತಿಯಲ್ಲಿ ಹಾರ ಹಾಕಿ, ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತಿತ್ತುಅಲ್ಲಿರುವ ಪ್ರಸಾದ ನಿಲಯದಲ್ಲಿ ಭೋಜನ ಮುಗಿಸಿ ಹಾವೇರಿಯ ಕಡೆಗೆ ವಾಪಸ್ಸು ಹೊರಟೆವು.
Shishuvinahala / Shishunala

Shishuvinahala / Shishunala

ಮಧ್ಯಾಹ್ನ 3:30
ದಾರೀಲಿ ಸವಣೂರು ತಾಲ್ಲೂಕಿನ ಮಾವೂರು ಎಂಬ ಹಳ್ಳಿಯಲ್ಲಿ ಬಹಳ ರುಚಿಯಾದ ಮಸಾಲೆ ಮಂಡಕ್ಕಿಯನ್ನು ತಿಂದು ಟೀ ಕುಡಿದು ಹೊರಟೆವು.

ಹಾವೇರಿಗೆ ಬಂದು ಅಟೋ ಚಾಲಕರಿಗೆ ಧನ್ಯವಾದ ಸಲ್ಲಿಸಿ, ಅಲ್ಲಿಂದ ರಾಣಿಬೆನ್ನೂರಿನ ಬಸ್ ಹತ್ತಿದೆವುವಿನೋದ್ರವರಿಗೆ ಕರೆ ಮಾಡಿ ನೀವು ಖಾಲಿ ಇದ್ದರೆ, ನಮ್ಮನ್ನು ಉಕ್ಕಡಗಾತ್ರಿಗೆ ಕರೆದುಕೊಂಡು ಹೋಗುತ್ತೀರಾ ಎಂದು ಕೇಳಿದ್ದಕ್ಕೆ, ಅವರು ಒಪ್ಪಿ ನಾವು ರಾಣಿಬೆನ್ನೂರು ಮುಟ್ಟುವಷ್ಟರಲ್ಲಿ ಅವರ ಸ್ನೇಹಿತ ಅರುಣ್ ಅವರೊಟ್ಟಿಗೆ ಬಂದು, ಬಸ್ ನಿಲ್ದಾಣದ ಬಳಿ ನಮಗಾಗಿ ಕಾಯುತ್ತಿದ್ದರುಅಲ್ಲಿಂದ ನಮ್ಮ ಪಯಣ ಉಕ್ಕಡಗಾತ್ರಿಯತ್ತ ಸಾಗಿತು.
ದಾರೀಲಿ Google ಮಾಡಿ ನೋಡಿದಾಗ ಉಕ್ಕಡಗಾತ್ರಿ ಇರುವುದು ದಾವಣಗೆರೆ ಜಿಲ್ಲೆಯಲ್ಲಿ ಎಂದು ತಿಳಿಯಿತುನಮ್ಮ ಪ್ರವಾಸದನಾವೇ ಹಾಕಿಕೊಂಡ ಕಟ್ಟು ಪಾಡು ಇದೆಯಲ್ಲ! ಜಿಲ್ಲೆಯ ಗಡಿ ದಾಟಬಾರದು ಎಂದು (ಚಲನಚಿತ್ರದಲ್ಲಿ ಸಾಧುಕೋಕಿಲ  ಗೆರೆ ದಾಟಿ ನೀನ್ ಬರ್ಬೇಡ,  ಗೆರೆ ದಾಟಿ ನಾನ್ ಬರೋಲ್ಲ ಅನ್ನೋದು ನೆನಪಾಯಿತು). 
ಅದಕ್ಕೆ ಗಾಡಿಯನ್ನು ಅಬಲೂರಿನ ಕಡೆ ತಿರುಗಿಸಿದೆವು.

ಸಂಜೆ 6:50
ಅಬಲೂರು - ಸರ್ವಜ್ಞನ ಹುಟ್ಟೂರು
ಬಸವೇಶ್ವರ ದೇವಾಲಯ:
ಪೂರ್ವಾಭಿಮುಖವಾಗಿರುವ ಬೃಹದಾಕಾರದ ಬಸವನ ಮೂರ್ತಿಯಿದೆ. ಬ್ರಹ್ಮೇಶ್ವರ ಹೆಸರಿನ ಶಿವಲಿಂಗವಿದೆಹಿಂಬದಿಯಲ್ಲಿ ಸೂರ್ಯನಾರಾಯಣ, ದಕ್ಷಿಣಾಭಿಮುಖವಾಗಿರುವ ವಿಷ್ಣುವಿನ ವಿಗ್ರಹಗಳಿವೆ.
 ದೇವಾಲಯವೂ ಸಹ ಕಲ್ಯಾಣ ಚಾಲುಕ್ಯರ ಶೈಲಿಯದ್ದಾಗಿದೆ.

Abaluru

Basaveshwara Temple - Abaluru

Basaveshwara Temple - Abaluru

Sarvajna Statue - Abaluru
                                                               ಆಕಾಶದೆತ್ತರಕ್ಕೇರಿದ ವ್ಯಕ್ತಿ

ಸೋಮೇಶ್ವರ ದೇವಾಲಯ:
ಜಕಣಾಚಾರಿ ಕಟ್ಟಿದ್ದೆಂದು ಹೇಳುವ  ದೇವಾಲಯದ ಪಕ್ಕದಲ್ಲಿ ಸರ್ವಜ್ಞರ ಮನೆ ಇತ್ತೆಂದು ಹೇಳಲಾಗುವ ಸ್ಥಳದಲ್ಲಿ ಒಂದು ಮಂಟಪವನ್ನು ಕಟ್ಟಿದ್ದಾರೆಅಲ್ಲಿ ಯಾರೋ ತಮ್ಮ ಮನೆಯ ಬಟ್ಟೆಗಳನ್ನು ಒಣ ಹಾಕಿದ್ದರು (ಸರ್ವಜ್ಞರ ಕುಟುಂಬಸ್ಥರೋ ಏನೋಪ್ಪ). ಸರ್ವಜ್ಞನ ತಾಯಿಯ ಊರು ಅಬಲೂರೆಂದು ಹೇಳುತ್ತಾರೆ.
Someshwara Temple - Abaluru

16ನೇ ಶತಮಾನದಲ್ಲಿದ್ದರು ಎಂದು ಹೇಳಲಾಗುವ ಸರ್ವಜ್ಞರ ಬಗ್ಗೆಆಗಲೇ ದಾಖಲಾತಿಗಳು ನಿರ್ಮಾಣವಾಗುತ್ತಿದ್ದ ಬ್ರಿಟಿಷ್ ದತ್ತಸಂಚಯ (Database) ದಲ್ಲಿ ಯಾವುದೇ ಮಾಹಿತಿ ಇಲ್ಲಬಿಎಲ್ರೈಸ್ ರವರ "Epigraphia Indica" ದಲ್ಲಿ ಅವರು ಹೇಳಿರುವುದು "Abaluru is the birth place of Sarvajna".
"ಅಂಬಲೂರೊಳಗೆಸೆವ ಕುಂಬಾರ ಸಾಲೆಯಲಿ 
ಇಂಜಿನಾ ಕಳೆಯ ಮಾಳೆಯಾಳು ಬಸವರಸನಿಂ 
ಬಿಟ್ಟೆನೆನ್ನ ಸರ್ವಜ್ಞ"
ಉತ್ತಂಗಿ ಚನ್ನಬಸಪ್ಪವರು 2020 ಸರ್ವಜ್ಞ ವಚನಗಳ ಸಂಗ್ರಹಣೆ ಮಾಡಿದ್ದರೆಶಿವಕೊಟ್ಯಾಚಾರ್ಯ ಎನ್ನುವವರು "ಅಬಲೂರು ಚರಿತೆ" ಎನ್ನುವ ಪುಸ್ತಕ ಬರೆದಿದ್ದಾರೆ -- ಇವಿಷ್ಟೂ ನಮಗೆ ಅಬಲೂರಿನಲ್ಲಿ ನೆಲೆಸಿರುವ ಪ್ರವೀಣ್ ನಾಡಿಗೇರ್ ಎನ್ನುವ ಉಪಾಧ್ಯಾಯರು ನೀಡಿದ ಮಾಹಿತಿ.
ಅಬಲೂರಿನಿಂದ ಹೊರಡುವಾಗ ಏನೋ ತವರು ಮನೆಯನ್ನು ತೊರೆದು ಹೋಗುವ ಭಾವತುಂಬಾ ಪ್ರಶಾಂತತೆಯಿಂದ ಕೂಡಿರುವ ಊರುಅಲ್ಲಿ ಪೆಟ್ಟಿಗೆ ಅಂಗಡಿ ಮುಂದೆ ಕೂತಿದ್ದ ಜನಗಳನ್ನು ನೋಡಿದಾಗ ಏನೋ ಕಳೆದುಕೊಂಡಂತಹ ಭಾವ ....

ಸದಾ ಓಡುತ್ತಲೇ ಇರುವ ಬ್ಯುಸಿ ಬೆಂಗಳೂರು ಮತ್ತು ತನ್ನದೇ ನಿಧಾನ ಗತಿಯಲ್ಲಿ ಚಲಿಸುವ ಅಬಲೂರಿನಂತಹ ಹಳ್ಳಿಗಳು .....

ಎಷ್ಟೇ ಪೂರ್ವ ಯೋಜಿತವಾಗಿ ಮಾಹಿತಿ ಸಂಗ್ರಹಣೆ ಮಾಡಿದ್ದರೂ,  ತರಹದ ಒಂದು ಹೊಸ ಪ್ರಯತ್ನ ಮಾಡುವಾಗ ಎಲ್ಲೋ ಏನೋ ಒಂದು ಅಳುಕಿರುತ್ತದೆಏನ್ ಮಾಡ್ತೀವಿಊಟ, ಮತ್ತು ವಸತಿ ಎಲ್ಲಿ ಎಂಬ ಯಾವುದೇ ಪೂರ್ವ ನಿಯೋಜನೆ ಇರುವುದಿಲ್ಲನಿನ್ನೊಟ್ಟಿಗೆ ನಾವಿದ್ದೇವೆ ಎಂದು ಹೇಳಿ, ನಂಗೆ ಆಗಾಗ ಪಲ್ಲವಿ ಇವೆಂಟ್ ತುಂಬಾ ಚೆನ್ನಾಗಾಗ್ತಾ ಇದೆ ಅಂತ ಹುರುಪು ತುಂಬಿ, ನನ್ನೊಟ್ಟಿಗೆ ಸಾಥ್ ನೀಡಿದ ಸತೀಶಶ್ರೀಕಾಂತ್ ಅಂಕಲ್ ಮತ್ತು ರಾಮ್ಗೆ ನಾನು ಚಿರರುಣಿ.

ಎರಡು ದಿನ ಏನೇನ್ ಮಾಡ್ದೆ ಅಂತ ಮೆಲುಕು ಹಾಕಿದಾಗಹಾವೇರಿ ಜಿಲ್ಲೆಯ ಒಟ್ಟು 7 ತಾಲ್ಲೂಕುಗಳಲ್ಲಿ 6 ತಾಲ್ಲೂಕುಗಳನ್ನು ಸುತ್ತಿ ಬಂದಿದ್ದೆವು.



ಹಾವೇರಿ - ಪುರ ಸಿದ್ದೇಶ್ವರ ದೇವಾಲಯ 
ರಾಣಿಬೆನ್ನೂರು - ಕೆರಿಮಲ್ಲಾಪುರ, ಚೌಡಯ್ಯದಾನಪುರ, ಗಳಗನಾಥ, ಹರಳಳ್ಳಿ
ಹಿರೇಕೆರೂರು - ಅಬಲೂರು
ಶಿಗ್ಗಾಂವ್ - ಶಿಶುವಿನಹಾಳ 
ಸವಣೂರು - ಮಾವೂರು 
ಬ್ಯಾಡಗಿ - ಬ್ಯಾಡಗಿ ಸಂತೆ, ಕಾಗಿನೆಲೆ
ಹಾನಗಲ್ - :(


ಹಾವೇರಿ ಜಿಲ್ಲೆಯಲ್ಲಿ ನಾನು ಗಮನಿಸಿದ್ದು:

  • ಮಚ್ಚಿಲ್ ಹೊಡಿತೀನಿ - ನೀವೇನಾದ್ದ್ರು ಮಚ್ಚು ತೊಗೊಂಡ್ ಹೊಡಿತೀನಿ ಅಂತ ಅರ್ಥ ಮಾಡ್ಕೊಂಡ್ರೆ ಅದು ತಪ್ಪು - ಚಪ್ಪಲಿ ತೊಗೊಂಡ್ ಹೊಡಿತೀನಿ ಅಂತ ಇದರರ್ಥ. 
  • ಮಾತು ಕಲಿಯುವ ಕಂದಮ್ಮಗಳು ಅಮ್ಮಅಪ್ಪ ಅಂತ ಹೇಳೋದನ್ನು ಕಲ್ಯೋಕ್ಕೆ ಮುಂಚೇನೇ "ಯಾಕ್ಲೇ" ಅಂತಾವೆ ಅಂತ ನನ್ನ ಅನುಮಾನ !!
  • ಸಿದ್ದ್ರಾಮಣ್ಣ ಕಾಗಿನೆಲೆ  ಚಂದ ಮಾಡಿದ ಹಾಗೆ ಅಬಲೂರು ಯಾಕ್ ಮಾಡ್ಲಿಲ್ಲ?
  • ಹಾವೇರಿ ಜಿಲ್ಲೆಯಲ್ಲಿ ನಾವು ನೋಡಿದ ಅಷ್ಟೂ ದೇವಾಲಯಗಳು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿವೆ. 
  • ಹಾವೇರಿ ಜಿಲ್ಲೆಯ ದಕ್ಷಿಣ ಭಾಗ ಶುಚಿಯಾಗಿರುವಷ್ಟು ಉತ್ತರ ಭಾಗ (ಶಿಗ್ಗಾಂವ್, ಸವಣೂರುಯಾಕಿಲ್ಲ?

ರಾಣಿಬೆನ್ನೂರಿಗೆ ಹಿಂದಿರುಗಿ ಊಟ ಮುಗಿಸಿಅಷ್ಟರಲ್ಲಾಗಲೇ ಹತ್ತಿರದ ಸ್ನೇಹಿತರಂತಾಗಿಬಿಟ್ಟಿದ್ದ ವಿನೋದ್ ಮತ್ತು ಅರುಣ್‌ರವರಿಂದ ಬೀಳ್ಕೊಂಡು ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹಿಂದಿರುಗಲು ನಾವು ಕಾಯ್ದಿರಿಸಿದ್ದ ಬಸ್ಸಿಗಾಗಿ ಕಾಯುತ್ತಿದ್ದೆವು. ನಾನು ಮನಸ್ಸಿನಲ್ಲಿ 4 ಜನ ಆದ್ದ್ರುನೂ, ಇವೆಂಟ್ ನಾನಂದುಕೊಂಡದ್ದಕ್ಕಿಂತ  ಚೆನ್ನಾಗಿ ಆಯಿತುಮುಂದಿನ ಜಿಲ್ಲೆಗೆ ಮುಂದಿನ ತಿಂಗಳು ಹಾಕೋದಾ ಅಂತ ಯೋಚಿಸುತ್ತಾ ಕುಳಿತಿದ್ದೆ.

ಅಷ್ಟರಲ್ಲಿ ಮೂರೂ ಜನ ಬಂದು ಕೇಳತೊಡಗಿದರು .... "ಮುಂದಿನ ತಿಂಗಳು, ಯಾವ ಜಿಲ್ಲೆ????"

ನನ್ ಕಡೆಯಿಂದ ವಿಶೇಷ ಕೃತಜ್ಞತೆಗಳು:
ಆಶಾ ಮತ್ತು ಕುಮಾರ್ ಕುಟುಂಬ - ಕೆರಿಮಲ್ಲಾಪುರ 
ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆರಿಮಲ್ಲಾಪುರ
ರೈತ ಸಹಕಾರ ಸಂಘದ ಸದಸ್ಯರು - ಕೆರಿಮಲ್ಲಾಪುರ
ಆಟೋ ವಿನೋದ್ ಹಾಗೂ ಅರುಣ್ - ರಾಣಿಬೆನ್ನೂರು 
ಶ್ರೀನಿವಾಸ್ ಮೂರ್ತಿ ಸರ್ - ನಮ್ ಮೇಷ್ಟ್ರು 
ಪ್ರವೀಣ್ ನಾಡಿಗೇರ್ - ಅಬಲೂರು 
ರಾಘು ಮಾವ 
ಇನ್ನೂ ಎಷ್ಟೋ ನೆನಪಿನಲ್ಲಿ ಉಳಿಯದಿರುವ ಹೆಸರುಗಳಿವೆ

                                                                            ...... ಮುಂದಿನ ಮಾಸ ಮತ್ತೊಂದು ಜಿಲ್ಲೆ.

                                                                                                                     -ಪಲ್ಲವಿ ರಂಗನಾಥ್